ಪೀಡೊಫಿಲಿಆ [ಇಂಗ್ಲಿಷ್: / ಪೀಡೊಫಿಲಿಆ] ಎನ್ನುವುದು ವಯಸ್ಕರು ಮಗುವಿನ ಅಥವಾ ಮಕ್ಕಳ ಮೇಲೆ ಹೊಂದಿದಂತ ಲೈಂಗಿಕ ದೃಷ್ಟಿಕೋನ ಅಥವಾ ವಯಸ್ಕರು ಹಾಗು ಮಕ್ಕಳ ನಡುವಿನ ಲೈಂಗಿಕ ಚಟುವಟಿಕೆಯಾಗಿದೆ. ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ () (ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟುವಟಿಕೆ) ಎಂತಲೂ ಹಾಗೂ ಅದರ ಪುನಾರವರ್ತಿತ ಹಾಗು ತೀವ್ರ ಸ್ವರೂಪದ ಸ್ಥಿತಿಯನ್ನು ಒಂದು ಅಸ್ತವ್ಯಸ್ತತೆ () ಎಂತಲೂ ಪರಿಗಣೆಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ () ಐಸಿಡಿ-೧೦ರ (-10) ೨೦೧೫ನೇ ಆವೃತ್ತಿಯಲ್ಲಿ ಇದನ್ನು "ಸಾಮಾನ್ಯವಾಗಿ ಪ್ರಾಯಕ್ಕೆ ಮುಂಚಿನ ಅಥವಾ ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ, ಹುಡುಗರ ಅಥವಾ ಹುಡುಗಿಯರ ಅಥವಾ ಇಬ್ಬರ ಮೇಲಿನ ಒಂದು ಲೈಂಗಿಕ ವ್ಯಾಮೋಹ" [" , , ".] ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. == ವ್ಯುತ್ಪತ್ತಿ == 'ಪೀಡೊಫಿಲಿಆ' ಎಂಬ ಪದದ ಮೂಲ ಗ್ರೀಕ್‌ನ 'ಪೈಡೊಫಿಲಿಆ' (παιδοφιλια ) - 'ಪೈಸ್' (παις : ಮಗು) ಮತ್ತು 'ಫಿಲಿಆ' (φιλια : ಒಲವು, ಇಚ್ಚೆ) ಎಂಬುದಾಗಿದೆ. ಪೈಡೊಫಿಲಿಆ ಎಂಬ ಪದವು ಗ್ರೀಕ್ ಕವಿಗಳಿಂದ ಪೈಡೆರಾಸ್ಟಿಆ () ಎಂಬ ಪದದ ಪರ್ಯಾಯವಾಗಿ ರಚನೆಯಾಯಿತು. ೧೮೮೬ ರಲ್ಲಿ 'ಪೀಡೊಫಿಲಿಆ ಏರೋಟಿಕಾ' ( ) ಎಂಬ ಪದವನ್ನು ಆಸ್ಟ್ರೋ-ಜರ್ಮನಿಯ ಮನೋವೈದ್ಯ ರಿಚರ್ಡ್ ವೊನ್ ಕ್ರಾಫ಼್ಟ್-ಎಬಿಂಗ್ ( -) ಎಂಬುವವರು ಅವರ ಸೈಕೊಪಾತಿಆ ಸೆಕ್ಸ್ಯ್^ಆಲಿಸ್ ( ) ಎಂಬ ಬರಹದಲ್ಲಿ ಬಳಸಿದರು. ೨೦ನೇ ಶತಮಾನದಿಂದ 'ಫಿಡೊಫಿಲಿಆ' ಎಂಬ ಪದವನ್ನು ಈಗಿನ ಅರ್ಥದಂತೆ ಬಳಸಲಾಗುತ್ತಿದೆ. == ವಿಧಗಳು == ಹೆಬೀಫಿಲಿಆ () : ಇದು ವಯಸ್ಕರು ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ (ಸಾಮಾನ್ಯವಾಗಿ ೧೧-೧೪ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. ನೆಪಿಒಫಿಲಿಆ ಅಥವಾ ಇನ್^ಫ್ಯಾ಼ನ್ಟೊಫಿಲಿಆ ( ) : ಇದು ವಯಸ್ಕರು ಎಳೆಯ ಮಕ್ಕಳ (ಸಾಮಾನ್ಯವಾಗಿ ೦-೩ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. ಇದು ಸಾಮಾನ್ಯವಾಗಿ ಅತ್ಯಂತ ವಿರಳವಾಗಿ ಕಂಡುಬರುತ್ತದೆ. == ಪೀಡೊಫೈಲ್ == ಮಗು ಅಥವಾ ಮಕ್ಕಳ ಮೇಲೆ ಲೈಂಗಿಕ ದೃಷ್ಟಿಕೋನವನ್ನು ಹೊಂದಿರುವ ವಯಸ್ಕನನ್ನು ಪೀಡೊಫೈಲ್ ( ) ಎನ್ನಲಾಗುತ್ತದೆ. ಪೀಡೊಫೈಲ್ ಪುರುಷ ಅಥವಾ ಸ್ತ್ರೀ ಆಗಿರಬಹುದು ಆದರೆ ಸಾಮಾನ್ಯವಾಗಿ ಪೀಡೊಫೈಲ್^ಗಳಲ್ಲಿ ಹೆಚ್ಚಿನವರು ಪುರುಷರಾಗಿರುತ್ತಾರೆ. == ಜನಸಂಖ್ಯೆ == == ಸಾಮಾಜಿಕ ನೋಟ == ಪೀಡೊಫಿಲಿಆವು ಸಮಾಜ ಹಾಗು ಕಾನೂನು ಬಾಹಿರವಾದಂತ ಒಂದು ಪ್ರಕಾರದ ಲೈಂಗಿಕತೆಯಾಗಿದ್ದು, ಸಮಾಜಗಳಲ್ಲಿ ಇದನ್ನು ಒಂದು ಅತ್ಯಂತ ಹೀನ ಕೃತ್ಯ ಹಾಗು ಅಪರಾಧ ಎಂಬಂತೆ ಪರಿಗಣೆಸಲಾಗುತ್ತದೆ. ಈ ರೀತಿಯ ಲೈಂಗಿಕತೆಯಲ್ಲಿ ತೂಡಗುವ ವ್ಯಕ್ತಿಗಳ ವಿರುದ್ಧ ಹೆಚ್ಚಿನ ಆಕ್ರೋಶ ವ್ಯಕ್ತವಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ಪೀಡೊಫಿಲಿಆ ಹಾಗೂ ಮಕ್ಕಳ ಲೈಂಗಿಕ ಅತ್ಯಚಾರಕ್ಕು ಸಾಕಷ್ಟು ವ್ಯತ್ಯಾಸಗಳಿದ್ದಾಗ್ಯೂ ಸಮಾಜಗಳಲ್ಲಿ ಅವೆರಡನ್ನೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ. == ಉಲ್ಲೇಖಗಳು ==